ವಿಷಯಕ್ಕೆ ಹೋಗು

ಕಾಲವನಾದಿ ಕರ್ಮವನಾದಿ ಜೀವವನಾದಿಯಾದಡೆಯೂ

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಕಾಲವನಾದಿ ಕರ್ಮವನಾದಿ ಜೀವವನಾದಿಯಾದಡೆಯೂ ಆಗಲಿ
ಘನನಿಧಿಶಕ್ತಿಯನರಿದಲ್ಲದೆ
ಘನನಿಲಯಶಕ್ತಿಯನರಿಯಬಾರದು. ಘನನಿಲಯಶಕ್ತಿಯನರಿದಲ್ಲದೆ
ತನೂದ್ವಹನಶಕ್ತಿಯನರಿಯಬಾರದು. ತನೂದ್ವಹನಶಕ್ತಿಯನರಿದಲ್ಲದೆ
ಆದಿಮಧ್ಯಾವಸಾನವನರಿಯಬಾರದು. ಆದಿಮಧ್ಯಾವಸಾನವನರಿದಲ್ಲದೆ
ಪಿಂಡಬ್ರಹ್ಮಾಂಡವನರಿಯಬಾರದು. ಪಿಂಡಬ್ರಹ್ಮಾಂಡವನರಿದಲ್ಲದೆ
ಉನ್ಮನಿಯ ಮುಖವ ಕಾಣಬಾರದು. ಉನ್ಮನಿಯ ಮುಖವ ಕಂಡಲ್ಲದೆ
ಲಿಂಗವ ಕಾಣಬಾರದು. ಲಿಂಗವ ಕಂಡು ಗಹಗಹಿಸಿ ಕೂಡಿದಲ್ಲದೆ
ಮತ್ರ್ಯದ ಹಂಗು ಹರಿಯದು. ಮತ್ರ್ಯದ ಹಂಗು ಹರಿದಲ್ಲದೆ
ಭವಂ ನಾಸ್ತಿಯಾಗದು ಕಾಣಾ ಕೂಡಲಚೆನ್ನಸಂಗಮದೇವಾ.