ಕಾಲಾಗ್ನಿರುದ್ರನ ಲೋಕದಿಂದ ಜೇನುಮಳೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಾಲಾಗ್ನಿರುದ್ರನ ಲೋಕದಿಂದ ಜೇನುಮಳೆ ಕರೆವುದ ಮಾನವಲೋಕದವರು ಕಂಡು
ಕಾಲಾಗ್ನಿರುದ್ರನ ಭುವನವೆತ್ತ ಜೇನುಮಳೆಯತ್ತಲೆಂದು ತಾವು ಚೋದ್ಯವ ಮಾಡುತ್ತಿರಲು
ಮೇಲಣ ಲೋಕದಿಂದ ಅಮೃತಸೋನೆ ಸುರಿಯಲು ಕಾಲಾಗ್ನಿ ಕೆಟ್ಟಿತ್ತು. ಜೇನುಸೋನೆ ಅಮೃತವಾಗದ ಮುನ್ನ
ನೋಡಬಂದವರೆಲ್ಲ ಸತ್ತುದ ಕಂಡು
[ತಾ] ನಿರ್ವಯಲಾದನು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.