ಕಾಲಿಲ್ಲದೆ ಕಣ್ಣಿಲ್ಲದೆ ನಡೆಯಬಲ್ಲಡೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಾಲಿಲ್ಲದೆ
ನಡೆಯಬಲ್ಲಡೆ
ಶಿವಯೋಗಿಯೆಂಬೆನಯ್ಯಾ.
ಕೈಯಿಲ್ಲದೆ
ಮುಟ್ಟಬಲ್ಲಡೆ
ಶಿವಯೋಗಿಯೆಂಬೆನಯ್ಯಾ.
ಕಣ್ಣಿಲ್ಲದೆ
ನೋಡಬಲ್ಲಡೆ
ಶಿವಯೋಗಿಯೆಂಬೆನಯ್ಯಾ.
ಕಿವಿ
ಇಲ್ಲದೆ
ಕೇಳಬಲ್ಲಡೆ
ಶಿವಯೋಗಿಯೆಂಬೆನಯ್ಯಾ.
ನಾಲಿಗೆ
ಇಲ್ಲದೆ
ಸವಿಯಬಲ್ಲಡೆ
ಶಿವಯೋಗಿಯೆಂಬೆನಯ್ಯಾ.
ನಾಸಿಕವಿಲ್ಲದೆ
ವಾಸಿಸಬಲ್ಲಡೆ
ಶಿವಯೋಗಿಯೆಂಬೆನಯ್ಯಾ.
ಮನವಿಲ್ಲದೆ
ನೆನೆಯಬಲ್ಲಡೆ
ಶಿವಯೋಗಿಯೆಂಬೆನಯ್ಯಾ.
ತಾನಿಲ್ಲದೆ
ಕೂಡಬಲ್ಲಡೆ
ಶಿವಯೋಗಿಯೆಂಬೆನಯ್ಯಾ.
ಇಂತೀ
ಭೇದವನರಿಯದೆ
ವೇಷವ
ಧರಿಸಿ
ತಿರುಗುವರೆಲ್ಲರು
ಭವರೋಗಿಗಳೆಂಬೆನಯ್ಯಾ
ಅಖಂಡೇಶ್ವರಾ.