ಕಾಲ ಕಲ್ಪಿತನಲ್ಲ ಕರ್ಮವಿರಹಿತ ಶರಣ. ವಿಧಿ ನಿಷೇಧ ಪುಣ್ಯ-ಪಾಪ-ಕರ್ಮ-ಕಾಯನು ಅಲ್ಲ ಆ ಶರಣನು. ಅವರಿವರ ಬೆರಸಿಪ್ಪನು ತನ್ನ ಪರಿ ಬೇರೆ ! ನಿರಂತರ ಸುಖಿ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣರು ಪ್ರಪಂಚನೊಳಗಿದ್ದೂ ತನ್ನ ಪರಿ ಬೇರೆ