ಕಾಲ ಮುಟ್ಟಲಮ್ಮದ ಸಯದಾನ,

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಕಾಲ ಮುಟ್ಟಲಮ್ಮದ ಸಯದಾನ
ಕಲ್ಪಿತವಿಲ್ಲದ ಸಯದಾನ. ಅನಂತರತಿ ಎಂಬ ಹೆಂಗೂಸ ಮುಟ್ಟದ ಸಯದಾನ. ಭಾಳಲೋಚನನೆಂಬ ಜಂಗಮ ಮುಟ್ಟದ ಸಯದಾನ. ಎಲ್ಲಿಯೂ ಮುಟ್ಟದ ಸಯದಾನವ ನಿಮಗರ್ಪಿಸಿದೆನು ಆರೋಗಿಸಯ್ಯಾ ಪ್ರಭುವೆ
ಕೂಡಲಸಂಗಮದೇವಾ.