ಕಾವಿಯ ಸೀರೆಯ ಒಡೆಯರು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಾವಿಯ ಸೀರೆಯ ಒಡೆಯರು ಬಾವಿಯ ಆಳವ ನೋಡಿಹೆನೆಂದು ಹೋದರೆ ಬಾವಿಯ ಬಗದೇವಿ ನುಂಗಿದುದ ಕಂಡೆನಯ್ಯ. ಬಾವಿಯ ಹೂಳಿ
ಬಗದೇವಿಯ ಕೊಂದು ಕಾವಿಯ ಸೀರೆಯ ಹರಿದಲ್ಲದೆ ದೇವರ ಕಾಣಬಾರದು; ಪ್ರಾಣಲಿಂಗ ಸಂಬಂಧಿಗಳೆಂಬರೆ ನಾಚದವರನೇನೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.