ಕಾವಿ ಕಾಷಾಯಾಂಬರ ಜಡೆಮಾಲೆಯ

ವಿಕಿಸೋರ್ಸ್ದಿಂದ



Pages   (key to Page Status)   


ಕಾವಿ ಕಾಷಾಯಾಂಬರ ಜಡೆಮಾಲೆಯ ಧರಿಸಿದರೇನು
ಜಂಗಮವಾಗಬಲ್ಲನೆ ? ಸಾಕಾರದಲ್ಲಿ ಸನುಮತರಲ್ಲ
ನಿರಾಕಾರದಲ್ಲಿ ನಿರುತರಲ್ಲ. ತುರುಬು ಜಡೆ ಬೋಳೆನ್ನದೆ ಅರಿವುಳ್ಳಾತನೆ ಜಂಗಮ. ಅರಿವಿಲ್ಲದೆಲ್ಲ ವೇಷ ಕಾಣಾ
ಕೂಡಲಚೆನ್ನಸಂಗಮದೇವಾ