ಕಿಚ್ಚಿಗೂ ನೀರಿಗೂ ಏಕತ್ವವುಂಟೆ?. ಗಾಳಿಗೂ ಧೂಳಿಗೂ ಏಕತ್ವವುಂಟೆ?. ಭೂಮಿಗೂ ಆಕಾಶಕ್ಕೂ ಏಕತ್ವವುಂಟೆ?. ನೀರಿಗೂ ನೆಳಲಿಗೂ ಏಕತ್ವವುಂಟೆ?. ಕನ್ನಡಿಗೂ ಪ್ರತಿಬಿಂಬಕ್ಕೂ ಏಕತ್ವವುಂಟೆ?. ತಮಕ್ಕೂ ಬೆಳಕಿಗೂ ಏಕತ್ವವುಂಟೆ?. ಪ್ರಾಣ ಪರತತ್ವದಲ್ಲಡಗಿದ ಪ್ರಾಣಲಿಂಗೈಕ್ಯಂಗೆ
ಪ್ರಪಂಚಿನ ಹೊದ್ದಿಗೆಯುಂಟೆ ಹೇಳಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.