ಕುಂಕುಮರಕ್ಷೆ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು


ನೀನು ಬಲ್ಲೆ ನಾನು ಬಲ್ಲೆ ನಮ್ಮ ಅಂತರಂಗ
ತುಟಿಗೆ ಬರದೆ ಇಂಗಿತೇಕೆ ನಮ್ಮ ಪ್ರಣಯ ಗಂಗಾ

ಹೂವಿನಿಂದ ಹೃದಯದಲ್ಲಿ ನೂರು ಕತೆಯ ರಚಿಸಿದೆ
ಮುಳ್ಳಿನಿಂದ ಗೀರಿ ಗೀರಿ ಏಕೆ ಎಲ್ಲ ಅಳಿಸಿದೆ

ಚಿಂತೆಯೆಂಬ ಚಿತೆಯಲೆನ್ನ ಎದೆಯು ಉರಿದು ಹೋಗಲಿ
ಅದರ ಬೆಳಕು ನಿನ್ನ ಬಾಳ ಮನೆಗೆ ತಾನು ಜ್ಯೋತಿ ಆಗಲಿ