ವಿಷಯಕ್ಕೆ ಹೋಗು

ಕುಂಡಲಿಗನ ಕೀಟದಂತೆ, ಮೈ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಕುಂಡಲಿಗನ ಕೀಟದಂತೆ
ಮೈ ಮಣ್ಣಾಗದಂತೆ ಇದ್ದೆಯಲ್ಲಾ ಬಸವಣ್ಣಾ. ಜಲದೊಳಗಣ ತಾವರೆಯಂತೆ ಹೊದ್ದಿಯೂ ಹೊದ್ದದಂತೆ ಇದ್ದೆಯಲ್ಲಾ ಬಸವಣ್ಣಾ. ಜಲದಿಂದಲಾದ ಮೌಕ್ತಿಕದಂತೆ
ಜಲವು ತಾನಾಗದಂತೆ ಇದ್ದೆಯಲ್ಲಾ ಬಸವಣ್ಣಾ. ಗುಹೇಶ್ವರಲಿಂಗದ ಆಣತಿವಿಡಿದು
ತನುಗುಣ ಮತ್ತರಾಗಿದ್ದ ಐಶ್ವರ್ಯಾಂಧಕರ ಮತವನೇನ ಮಾಡಬಂದೆಯಯ್ಯಾ
ಸಂಗನ ಬಸವಣ್ಣಾ ?