Transclusion_Status_Detection_Tool

ಕುಂಡಲಿಯ ಒಲೆಯ ಭಾಂಡದಲ್ಲಿ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ಕುಂಡಲಿಯ ಒಲೆಯ ಭಾಂಡದಲ್ಲಿ ಮಂಡಿಸಿಪ್ಪ ತುಂಡುಮುಂಡುಕಾರ್ತಿ ಜಗವನೆಲ್ಲಾ ಬಂಡುಮಾಡುತ್ತಿದಾಳೆ ನೋಡಾ. ಕುಂಡಲಿಯ ಒಲೆಯಲ್ಲಿ ಕೆಂಡವ ಚಾಚಲು ಭಾಂಡವೊಡೆದು ತಂಡು ಮುಂಡುಕಾರ್ತಿಯ ತಾಮಸ ಬೆಂದು ಕುಂಡಲಿಯ ಸರ್ಪನೆದ್ದು ಮಂಡೆವಾಲನುಂಡು ಮಡಿದುದ ಕಂಡೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.