ಕುಲಗಿರಿಯ ಶಿಖರದ ಮೇಲೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಕುಲಗಿರಿಯ ಶಿಖರದ ಮೇಲೆ ಬಾಳೆ ಬೆಳೆವುದಯ್ಯಾ ಎಂದಡೆ
ಬಾಳೆ ಬೆಳೆವುದಯ್ಯಾ ಎನಬೇಕು. ಓರೆಗಲ್ಲ ನುಗ್ಗುಗುಟ್ಟಿ ಮೆಲಬಹುದಯ್ಯಾ ಎಂದಡೆ
ಅದು ಅತ್ಯಂತ ಮೃದು ಮೆಲಬಹುದಯ್ಯಾ ಎನಬೇಕು. ಸಿಕ್ಕದ ಠಾವಿನಲ್ಲಿ ಉಚಿತವ ನುಡಿವುದೆ ಕಾರಣ ಚೆನ್ನಮಲ್ಲಿಕಾರ್ಜುನ-[ಯ್ಯಾ] ಮರ್ತ್ಯಕ್ಕೆ ಬಂದುದಕ್ಕಿದೆ ಗೆಲವು.