ಕುಲಮದ ಛಲಮದ ವಿದ್ಯಾಮದದವರ ತೋರದಿರಾ. ಅವರ ಅರೂಢಪದವಿಯನೆನಗೆ ತೋರದಿರಾ. ಅವರ ಗರುವ ಗಂಭೀರವನೆನಗೆ ತೋರದಿರಾ. ಶಮೆದಮೆಯುಳಿದು ದಶಮುಖ ನಿಂದು ಲಿಂಗದಲ್ಲಿ ಲೀಯವಾದವರನಲ್ಲದೆ ಎನಗೆ ತೋರದಿರಾ ಗುಹೇಶ್ವರಾ.