ಕುಲವಿಲ್ಲದ ಅಕುಲನು, ಶರೀರವಿಲ್ಲದ
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಕುಲವಿಲ್ಲದ ಅಕುಲನು
ಶರೀರವಿಲ್ಲದ ಸಂಬಂಧಿ
ಕೋಪವಿಲ್ಲದ ಶಾಂತನು
ಮತ್ಸರವಿಲ್ಲದ ಮಹಿಮನು. ಕರ್ಮವಿಲ್ಲದ ಕಾರಣಿಕನು
ಅರ್ಪಿತವಿಲ್ಲದ ಆಪ್ಯಾಯನಿ
ಜಂಗಮವಿಲ್ಲದ ಸಮಶೀಲನು
ಲಿಂಗವಿಲ್ಲದ ನಿರುತನು. ಪ್ರಸಾದವಿಲ್ಲದ ಪರಿಣಾಮಿ ಕೂಡಲಚೆನ್ನಸಂಗಾ ನಿಮ್ಮ ಶರಣನು.