ವಿಷಯಕ್ಕೆ ಹೋಗು

ಕುಲವ ನೋಡದೆ, ಛಲವ

ವಿಕಿಸೋರ್ಸ್ದಿಂದ


ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಕುಲವ ನೋಡದೆ
ಛಲವ ನೋಡದೆ
ನಿಲವ ನೋಡದೆ ಕೂಡಿದ ಬಳಿಕ
ಅಲ್ಲಿ ಹೆಚ್ಚು ಕುಂದನರಸಲುಂಟೆ ಮುಂದುವರಿದು ಜಂಗಮಕ್ಕೆ ಭಕ್ತಿಯ ಮಾಡೆಂದು ನಿಮ್ಮ ಕಾರುಣ್ಯವನುಪದೇಶವ ಮಾಡಿದ ಬಳಿಕ ಬಂದುದ ಬಂದಂತೆ ಸಮನಿಸಿಕೊಳ್ಳಬೇಕಲ್ಲದೆ ಅಂತಿಂತೆನಬಾರದು ಕೇಳಯ್ಯಾ. ನೀನು ನಿರಾಕಾರ
ಸಾಕಾರವೆಂಬೆರಡು ಮೂರ್ತಿಯ ಧರಿಸಿಪ್ಪೆಯಾಗಿ
ಒಂದ ಜರೆದು ಒಂದ ಹಿಡಿದಿಹೆನೆಂದಡೆ ಅದೆ ಕೊರತೆ ನೋಡಾ ಪ್ರಭುವೆ
ಕೂಡಲಸಂಗಮದೇವಾ.