ಕೂಟಕಿಕ್ಕಿ ಮಾಡುವರೆಲ್ಲಾ ಕುಂಟಣಗಿತ್ತಿಯ

ವಿಕಿಸೋರ್ಸ್ದಿಂದ



Pages   (key to Page Status)   


ಕೂಟಕಿಕ್ಕಿ ಮಾಡುವರೆಲ್ಲಾ ಕುಂಟಣಗಿತ್ತಿಯ ಮಕ್ಕಳು
ಹರಸಿಕೊಂಡು ಮಾಡುವರೆಲ್ಲಾ ಹಾದರಗಿತ್ತಿಯ ಮಕ್ಕಳು
ವರ್ಷಕ್ಕೊಂದು ತಿಥಿಯೆಂದು ಮಾಡುವರೆಲ್ಲಾ ವೇಶಿಯ ಮಕ್ಕಳು
ಆ ಕೂಟಕ್ಕೆ ಮಾಡದೆ
ಹರಸಿಕೊಂಡು ಮಾಡದೆ
ವರ್ಷಕ್ಕೊಂದು ತಿಥಿಯೆಂದು ಮಾಡದೆ
ಸಹಜದಲ್ಲಿ ಮಾಡುವರೆಲ್ಲಾ ಸಜ್ಜನ ಪತಿವ್ರತೆಯ ಮಕ್ಕಳು ಕಾಣಾ
ಕೂಡಲಚೆನ್ನಸಂಗಮದೇವಾ