ಕೃತಯುಗದಲ್ಲಿ
ಶ್ರೀಗುರು
ಶಿಷ್ಯಂಗೆ
ಬಡಿದು
ಬುದ್ಧಿಯ
ಕಲಿಸಿದಡೆ
ಆಗಲಿ
ಮಹಾಪ್ರಸಾದವೆಂದೆನಯ್ಯಾ
ತ್ರೇತಾಯುಗದಲ್ಲಿ
ಶ್ರೀಗುರು
ಶಿಷ್ಯಂಗೆ
ಬೈದು
ಬುದ್ಧಿಯ
ಕಲಿಸಿದಡೆ
ಆಗಲಿ
ಮಹಾಪ್ರಸಾದವೆಂದೆನಯ್ಯಾ.
ದ್ವಾಪರದಲ್ಲಿ
ಶ್ರೀಗುರು
ಶಿಷ್ಯಂಗೆ
ಝಂಕಿಸಿ
ಬುದ್ಧಿಯ
ಕಲಿಸಿದಡೆ
ಆಗಲಿ
ಮಹಾಪ್ರಸಾದವೆಂದೆನಯ್ಯಾ.
ಕಲಿಯುಗದಲ್ಲಿ
ಶ್ರೀಗುರು
ಶಿಷ್ಯಂಗೆ
ವಂದಿಸಿ
ಬುದ್ಧಿಯ
ಕಲಿಸಿದಡೆ
ಆಗಲಿ
ಮಹಾಪ್ರಸಾದವೆಂದೆನಯ್ಯಾ
ಗುಹೇಶ್ವರಾ
ನಿಮ್ಮ
ಕಾಲದ
ಕಟ್ಟಳೆಯ
ಕಲಿತನಕ್ಕೆ
ನಾನು
ಬೆರಗಾದೆನು.