ಕೃತಯುಗದೊಳು ಸುವರ್ಣದ ಲಿಂಗವಾದಲ್ಲಿ

ವಿಕಿಸೋರ್ಸ್ದಿಂದ



Pages   (key to Page Status)   


ಕೃತಯುಗದೊಳು
ಸುವರ್ಣದ
ಲಿಂಗವಾದಲ್ಲಿ
ನಿನ್ನ
ಹೆಸರೇನು
?
ತ್ರೇತಾಯುಗದಲ್ಲಿ
ಬೆಳ್ಳಿಯ
ಲಿಂಗವಾದಲ್ಲಿ
ನಿನ್ನ
ತಂದೆ
ತಾಯಿ
ಯಾರು
?
ದ್ವಾಪರದೊಳು
ತಾಮ್ರದ
ಲಿಂಗವಾದಲ್ಲಿ
ಹದಿನೆಂಟು
ಜಾತಿಯ
ಕೈಲಿ
ಕಿಲುಬುಹೊಯಿತ್ತು.
ಕಲಿಯುಗದೊಳು
ಕಲ್ಲ
ಲಿಂಗವಾದಡೆ
ಇಕ್ಕಿದ
ಓಗರವನುಣ್ಣದೇಕೋ
?
ಹಿಂದೊಮ್ಮೆ
ನಾಲ್ಕು
ಯುಗದೊಳು
ಅಳಿದುಹೋದುದನರಿಯಾ
?
ಇನ್ನೇಕೆ
ದೇವತನಕ್ಕೆ
ಬೆರೆವುತ್ತಿಹೆ
?
ಸಾಕ್ಷಿ
:
ಸ್ಥಾವರಂ
ಜಂಗಮಶ್ಚೈವ
ದ್ವಿವಿಧಂ
ಲಿಂಗಮುಚ್ಯತೇ
ಜಂಗಮಸ್ಯಾವಮಾನೇನ
ಸ್ಥಾವರಂ
ನಿಷ್ಫಲಂ
ಭವೇತ್
ಇದು
ಕಾರಣ
ಕೂಡಲಚೆನ್ನಸಂಗಯ್ಯ
ತಪ್ಪದೆ
ಸ್ಥಾವರ
ದೇವರೆ
ಜಂಗಮ
ದೇವರ
ಪ್ರಸಾದಕ್ಕೆ
ಯೋಗ್ಯವಾಯಿತ್ತು.
ಅನಂತ
ಯುಗಂಗಳೊಳಗೆ
ಜಂಗಮ
ದೇವರೆ
ಪ್ರಾಣವಾದರಾಗಿ