ಕೃಷ್ಣಾ ಬಾರೋ

ವಿಕಿಸೋರ್ಸ್ ಇಂದ
Jump to navigation Jump to search

ರಾಗ : ಕಾಪಿ
ತಾಳ: ಆದಿ
, ಕೃಷ್ಣಾ ಬಾರೋ , ಕೃಷ್ಣಾ ಬಾರೋ
, ಕೃಷ್ಣಯ್ಯ ನೀ ಬಾರಯ್ಯ || ಪಲ್ಲವಿ ||

, ಸಣ್ಣ ಹೆಜ್ಜೆಗಳಿಟ್ಟು , ಗೆಜ್ಜೆ ನಾದಗಳಿಂದ || ಪ ||

, ಮನ್ಮಥ ಜನಕನೆ ಬೇಗನೆ ಬಾರೋ
ಕಮಲಾಪತಿ ನೀ ಬಾರೋ
ಅಮಿತ ಪರಾಕ್ರಮ ಶಂಕರ ಬಾರೋ
ಕಮನೀಯ ಗಾತ್ರನೆ ಬಾರಯ್ಯ ದೊರೆಯೇ || ಪ ||

, ಹಾಲು ಬೆಣ್ಣೆಗಳ ಕೈಯಲ್ಲಿ ಕೊಡುವೆ
ಮೇಲಾದಿ ಭಕ್ಷಗಳ ಮುಚ್ಚಿಟ್ಟು ತರುವೆ
, ಜಾಲ ಮಾಡದೆ ನೀ ಬಾರಯ್ಯ ಮರಿಯೇ
ಬಾರಾ ಎನ ತಂದೆ ಪುರಂದರ ವಿಠ್ಠಲ || ಪ ||