ಕೃಷ್ಣ ನೀ ಬೇಗನೆ ಬಾರೊ

ವಿಕಿಸೋರ್ಸ್ದಿಂದ
Jump to navigation Jump to search

ಸಾಹಿತ್ಯ : ಶ್ರೀ ವ್ಯಾಸರಾಯರು
ರಾಗ : ಯಮುನ ಕಳ್ಯಾಣಿ
ತಾಳ : ಛಾಪು


ಕೃಷ್ಣ ನೀ ಬೇಗನೆ ಬಾರೊ |
ಬೇಗನೆ ಬಾರೊ ಮುಖವನ್ನು ತೋರೊ |
ಕೃಷ್ಣ ನೀ ಬೇಗನೆ ಬಾರೊ || ಪ ||

ಕಾಲಲಂದಿಗಿ ಗೆಜ್ಜೆ ನೀಲದ ಬಾವುಲಿ |
ನೀಲ ವರ್ಣನೆ ನಾಟ್ಯವ ಆಡುತ ಬಾರೊ || ೧ ||
ಕೃಷ್ಣ ನೀ ಬೇಗನೆ ಬಾರೊ ||

ಉಡಿಯಲ್ಲಿ ಉಡುಗೆಜ್ಜೆ. ಬೆರಳಲ್ಲಿ ಉಂಗುರ |
ಕೊರಳೊಳು ಹಾಕಿದ್ದ ವೈಜಯಂತಿ ಮಾಲೆ || ೨ ||
ಕೃಷ್ಣ ನೀ ಬೇಗನೆ ಬಾರೊ ||

ಕಾಶಿ ಪಿತಾಂಬರ ಕೈಯಲ್ಲಿ ಕೊಳಲು |
ಪೂಸಿದ ಶ್ರೀಗಂಧ ಮೈಯೋಳು ಘಮ ಘಮ || ೩ ||
ಕೃಷ್ಣ ನೀ ಬೇಗನೆ ಬಾರೊ ||

ತಾಯಿಗೆ ಬಾಯಲ್ಲಿ.. ಜಗವನ್ನು ತೋರಿದ |
ಜಗದೋದ್ದಾರಕ ನಮ್ಮ ಉಡುಪಿ ಶ್ರೀ ಕೃಷ್ಣ! || ೪ ||

ಕೃಷ್ಣ ನೀ ಬೇಗನೆ ಬಾರೊ |
ಬೇಗನೆ ಬಾರೊ ಮುಖವನ್ನು ತೋರೊ |
ಕೃಷ್ಣ ನೀ ಬೇಗನೆ ಬಾರೊ ||