ಕೆಂಡದ ಗಿರಿಯ ಅರಗಿನ
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಕೆಂಡದ
ಗಿರಿಯ
ಅರಗಿನ
ಬಾಣದಲೆಚ್ಚಡೆ
ಮರಳಿ
ಆ
ಬಾಣವನರಸಲುಂಟೆ
?
ಮಂಜಿನ
ಶಿವಾಲಯಕ್ಕೆ
ಬಿಸಿಲ
ಕಳಸವುಂಟೆ
?
ಗುಹೇಶ್ವರನೆಂಬ
ಲಿಂಗವನರಿದ
ಬಳಿಕ
ಮತ್ತೆ
ಮರಳಿ
ನೆನೆಯಲುಂಟೆ
?