ಕೆದರಿದ ತಲೆಯ, ತೊನೆವ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಕೆದರಿದ ತಲೆಯ
ತೊನೆವ ನಡೆಯ
ಹಣೆಯ ಬುಗುಟಿನ
ಕರಸ್ಥಲದ ಅನಿಮಿಷದಿಂದ ಬಹಿರಂಗದ[ವಧಾ]ನ ತಪ್ಪಿ
ಇದಿರುಗೊಯಿಲು ತಾಗಿ ಪುರ್ಬೊಡೆದು
ಕಣ್ಣು ತರಿದು
ಕಿವಿ ಹರಿದು
ಜೋಲುವ ರಕ್ತಧಾರೆಯ
ಗಾಳಿಯ ಧೂಳಿಯ ಮಳೆಯ ಜೋರಿನ
ಬೆನ್ನ ಬಾಸುಳದ
ಎಡಬಲದ ಬರಿಯ ತದ್ದಿನ
ಮುಳ್ಳುದರಹಿನ
ಕಂಕುಳ ಸೀಳ ಕಂಡು ನೋಡುವ ಜನರು ಬೆರಗಾಗೆ_ ಪೊರವಾರಿನ ಮರೆಯ ದಿಗಂಬರದ ಬಣಗು ಸುರಿವುತ್ತ
ಆಪ್ಯಾಯನವರತು
ಬಿದ್ದು ಮೊಳಕಾಲೊಡೆದು
ಹೊಸ ಹುಣ್ಣಿನ ರಕ್ತದ ಜೋರು ಹರಿದು
ಮುಂಗಾಲ ಕಣೆ [ಒ]ಳೆದು
ಕಣಕಾಲ ಸಂದು ತಪ್ಪಿ
ಕಿರುಬೆರಳು ಎಡಹಿ
ಹೆಬ್ಬೊಟ್ಟೆಡೆದ ಗಾಯದ
ಉರುಗು ಟೊಂಕದ
ಪೆರಚು ಗುಂಟನ ನೋಡಾ ಚೆನ್ನಬಸವಣ್ಣಾ. ಅತ್ಯಂತ ಮಲಿನ ಕೂಡಲಸಂಗಮದೇವರ ಕುರುಹು ವಿಪರೀತ
ನೋಡುವಡೆ ಭಯಂಕರವಾಗಿದೆ ನೋಡಯ್ಯಾ.