ಕೇಳಿರೆ ಕೇಳಿರೆ ಹಿರಿಯರು,

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಕೇಳಿರೆ ಕೇಳಿರೆ ಹಿರಿಯರು
ಗುರುವಿನ ಉಪದೇಶವನು; ಒಂದು ಗೀಜಗನ ಉಪದೇಶದಿಂದ ಪೌಲಸ್ತ್ಯನಂದು ಹಡೆಯನೆ ದಶಮುಖನ ಶಿರವ ಹರಿದಿಕ್ಕೆ ಪರಮನಿದ್ದೆಡೆಯು ಕಾಣದೇನಿಳೆಯಲ್ಲಿ ಕರುಳ ತಂತಿಯ ಉಪದೇಶದಿಂದ ಅಸುರನಂದು ಹಡೆಯನೆ ಸುರಪದವ ತರುಣಿ ಹರಿಣಿಯ ಹಿತೋಪದೇಶದಿಂದ ಗತಿಮುಕ್ತಿಯ ಪಡೆದು ಬಟ್ಟೆಯ ಹತ್ತನೆ ವಿನಾಶಕ್ತಿರಾಯನು ರಂಭೆಯ ಉಪದೇಶದಿಂದ ಶಂಭುವಿನೋಲಗದಲ್ಲಿ ಕುಳ್ಳಿರನೆ ಶ್ವೇತನು ನಮ್ಮ ಕೂಡಲಸಂಗನ ಶರಣರ ಉಪದೇಶವ ಕೇಳಿದವರಿಗೆ ದುರಿತ ಪಾಪಂಗಳು ಬಿಟ್ಟುಹೋಗಿ
ಮನ ನಿರುತರಾಗಿಪ್ಪರಾ ಲಿಂಗದಲ್ಲಿ.