ವಿಷಯಕ್ಕೆ ಹೋಗು

ಕೇಳಿ, ನಿರ್ಣಯವನು ಕೇಳಿರಯ್ಯಾ

ವಿಕಿಸೋರ್ಸ್ದಿಂದ


Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಕೇಳಿ
ಕೇಳಿರಯ್ಯಾ ಶಿವಭಕ್ತಶರಣಜನಂಗಳು ನೀವೆಲ್ಲ. ನೂರೊಂದು ಸ್ಥಲದ ನಿರ್ಣಯವನು ಆರುಸ್ಥಲದಲ್ಲಡಗಿಸಿ
ಆರುಸ್ಥಲದ ನಿರ್ಣಯವನು ಮೂರುಸ್ಥಲದಲ್ಲಡಗಿಸಿ
ಆ ಮೂರುಸ್ಥಲ ಒಂದಾದ ಮೂಲಬ್ರಹ್ಮದಲ್ಲಿ ಶರಣನ ಕುರುಹು ಅಡಗಿ ನಿರ್ಮಾಯವಾದ ಭೇದಮಂ ಪೇಳ್ವೆ. ಅದೆಂತೆನಲು : ಪಿಂಡಸ್ಥಲ
ಪಿಂಡಜ್ಞಾನಸ್ಥಲ
ಸಂಸಾರಹೇಯಸ್ಥಲ
ಗುರುಕರುಣಸ್ಥಲ
ಲಿಂಗಧಾರಣಸ್ಥಲ
ವಿಭೂತಿಸ್ಥಲ
ರುದ್ರಾಕ್ಷಿಸ್ಥಲ
ಪಂಚಾಕ್ಷರಿಸ್ಥಲ
ಭಕ್ತಿಸ್ಥಲ
ಉಭಯಸ್ಥಲ
ತ್ರಿವಿಧಸಂಪತ್ತಿಸ್ಥಲ
ಚತುರ್ವಿಧಸಾರಾಯಸ್ಥಲ
ಉಪಾಧಿಮಾಟಸ್ಥಲ
ನಿರುಪಾಧಿಮಾಟಸ್ಥಲ
ಸಹಜಮಾಟಸ್ಥಲ
ಈ ಹದಿನೈದು ಭಕ್ತಸ್ಥಲಂಗಳು. ದೀಕ್ಷಾಗುರುಸ್ಥಲ
ಶಿಕ್ಷಾಗುರುಸ್ಥಲ
ಜ್ಞಾನಗುರುಸ್ಥಲ
ಕ್ರಿಯಾಲಿಂಗಸ್ಥಲ
ಭಾವಲಿಂಗಸ್ಥಲ
ಜ್ಞಾನಲಿಂಗಸ್ಥಲ
ಸ್ವಯಸ್ಥಲ
ಚರಸ್ಥಲ
ಪರಸ್ಥಲ
ಈ ಒಂಬತ್ತು ಆಚಾರಲಿಂಗಸ್ಥಲಂಗಳು. ಇಂತೀ ಉಭಯ ಸ್ಥಲವು ಕೂಡಿ 24 ಸ್ಥಲಂಗಳಾಗಿ
ಆಧಾರಚಕ್ರದಲ್ಲಿ ಸಂಬಂಧವಾಗಿರ್ಪುವು. ಮಹೇಶ್ವರಸ್ಥಲ
ಲಿಂಗನಿಷಾ*ಸ್ಥಲ
ಪೂರ್ವಾಶ್ರಯನಿರಸನಸ್ಥಲ
ವಾಗದ್ವೈತನಿರಸನಸ್ಥಲ
ಆಹ್ವಾನನಿರಸನಸ್ಥಲ
ಅಷ್ಟತನುಮೂರ್ತಿನಿರಸನಸ್ಥಲ
ಸರ್ವಗತನಿರಸನಸ್ಥಲ
ಶಿವಜಗನ್ಮಯಸ್ಥಲ
ಭಕ್ತದೇಹಿಕಸ್ಥಲ
ಈ ಒಂಬತ್ತು ಮಹೇಶ್ವರಸ್ಥಲಂಗಳು. ಕ್ರಿಯಾಗಮಸ್ಥಲ
ಭಾವಾಗಮಸ್ಥಲ
ಜ್ಞಾನಾಗಮಸ್ಥಲ
ಸಕಾಯಸ್ಥಲ
ಅಕಾಯಸ್ಥಲ
ಪರಕಾಯಸ್ಥಲ
ಧರ್ಮಾಚಾರಸ್ಥಲ
ಭಾವಾಚಾರಸ್ಥಲ
ಜ್ಞಾನಾಚಾರಸ್ಥಲ
ಈ ಒಂಬತ್ತು ಗುರುಲಿಂಗಸ್ಥಲಂಗಳು. ಇಂತೀ ಉಭಯಸ್ಥಲವು ಕೂಡಿ 18 ಸ್ಥಲಂಗಳಾಗಿ
ಸ್ವಾಧಿಷಾ*ನಚಕ್ರದಲ್ಲಿ ಸಂಬಂಧವಾಗಿರ್ಪುವು. ಪ್ರಸಾದಿಸ್ಥಲ
ಗುರುಮಹಾತ್ಮೆಸ್ಥಲ
ಲಿಂಗಮಹಾತ್ಮೆಸ್ಥಲ
ಜಂಗಮಮಹಾತ್ಮೆಸ್ಥಲ
ಭಕ್ತಮಹಾತ್ಮೆಸ್ಥಲ
ಶರಣಮಹಾತ್ಮೆಸ್ಥಲ
ಪ್ರಸಾದಮಹಾತ್ಮೆಸ್ಥಲ
ಈ ಏಳು ಪ್ರಸಾದಿಸ್ಥಲಂಗಳು. ಕಾಯಾನುಗ್ರಹಸ್ಥಲ
ಇಂದ್ರಿಯಾನುಗ್ರಹಸ್ಥಲ
ಪ್ರಾಣಾನುಗ್ರಹಸ್ಥಲ
ಕಾಯಾರ್ಪಿತಸ್ಥಲ
ಕರಣಾರ್ಪಿತಸ್ಥಲ
ಭಾವಾರ್ಪಿತಸ್ಥಲ
ಶಿಷ್ಯಸ್ಥಲ
ಶುಶ್ರೂಷಾಸ್ಥಲ
ಸೇವ್ಯಸ್ಥಲ
ಈ ಒಂಬತ್ತು ಶಿವಲಿಂಗಸ್ಥಲಂಗಳು. ಇಂತೀ ಉಭಯಸ್ಥಲವು ಕೂಡಿ 16 ಸ್ಥಲಂಗಳಾಗಿ
ಮಣಿಪೂರಕಚಕ್ರದಲ್ಲಿ ಸಂಬಂಧವಾಗಿರ್ಪುವು. ಪ್ರಾಣಲಿಂಗಿಸ್ಥಲ
ಪ್ರಾಣಲಿಂಗಾರ್ಚನಾಸ್ಥಲ
ಶಿವಯೋಗಸಮಾಧಿಸ್ಥಲ
ಲಿಂಗನಿಜಸ್ಥಲ
ಅಂಗಲಿಂಗಸ್ಥಲ
ಈ ಐದು ಪ್ರಾಣಲಿಂಗಿಸ್ಥಲಂಗಳು
ಜೀವಾತ್ಮಸ್ಥಲ
ಅಂತರಾತ್ಮಸ್ಥಲ
ಪರಮಾತ್ಮಸ್ಥಲ
ನಿರ್ದೇಹಾಗಮಸ್ಥಲ
ನಿರ್ಭಾವಾಗಮಸ್ಥಲ
ನಷ್ಟಾಗಮಸ್ಥಲ
ಆದಿಪ್ರಸಾದಿಸ್ಥಲ
ಅಂತ್ಯಪ್ರಸಾದಿಸ್ಥಲ
ಸೇವ್ಯಪ್ರಸಾದಿಸ್ಥಲ
ದೀಕ್ಷಾಪಾದೋದಕಸ್ಥಲ
ಶಿಕ್ಷಾಪಾದೋದಕಸ್ಥಲ
ಜ್ಞಾನಪಾದೋದಕಸ್ಥಲ
ಈ ಹನ್ನೆರಡು ಜಂಗಮಲಿಂಗಸ್ಥಲಂಗಳು. ಇಂತೀ ಉಭಯಸ್ಥಲವು ಕೂಡಿ 17 ಸ್ಥಲಂಗಳಾಗಿ
ಅನಾಹತಚಕ್ರದಲ್ಲಿ ಸಂಬಂಧವಾಗಿರ್ಪುವು. ಶರಣಸ್ಥಲ
ತಾಮಸನಿರಸನಸ್ಥಲ
ನಿರ್ದೇಶಸ್ಥಲ
ಶೀಲಸಂಪಾದನಾಸ್ಥಲ
ಈ ನಾಲ್ಕು ಶರಣಸ್ಥಲಂಗಳು. ಕ್ರಿಯಾನಿಷ್ಪತ್ತಿಸ್ಥಲ
ಭಾವನಿಷ್ಪತ್ತಿಸ್ಥಲ
ಜ್ಞಾನನಿಷ್ಪತ್ತಿಸ್ಥಲ
ಪಿಂಡಾಕಾಶಸ್ಥಲ
ಬಿಂದ್ವಾಕಾಶಸ್ಥಲ
ಮಹದಾಕಾಶಸ್ಥಲ
ಕ್ರಿಯಾಪ್ರಕಾಶಸ್ಥಲ
ಭಾವಪ್ರಕಾಶಸ್ಥಲ
ಜ್ಞಾನಪ್ರಕಾಶಸ್ಥಲ
ಈ ಒಂಬತ್ತು ಪ್ರಸಾದಿಲಿಂಗಸ್ಥಲಂಗಳು. ಇಂತೀ ಉಭಯಸ್ಥಲವು ಕೂಡಿ 13 ಸ್ಥಲಂಗಳಾಗಿ
ವಿಶುದ್ಧಿಚಕ್ರದಲ್ಲಿ ಸಂಬಂಧವಾಗಿರ್ಪುವು. ಐಕ್ಯಸ್ಥಲ
ಸರ್ವಾಚಾರಸಂಪತ್ತಿಸ್ಥಲ
ಏಕಭಾಜನಸ್ಥಲ
ಸಹಭೋಜನಸ್ಥಲ
ಈ ನಾಲ್ಕು ಐಕ್ಯಸ್ಥಲಂಗಳು. ಕೊಂಡುದು ಪ್ರಸಾದಿಸ್ಥಲ
ನಿಂದುದೋಗರಸ್ಥಲ
ಚರಾಚರನಾಸ್ತಿಸ್ಥಲ
ಭಾಂಡಸ್ಥಲ
ಭಾಜನಸ್ಥಲ
ಅಂಗಲೇಪನಸ್ಥಲ
ಸ್ವಯಪರಜ್ಞಾನಸ್ಥಲ
ಭಾವಾಭಾವನಷ್ಟಸ್ಥಲ
ಜ್ಞಾನಶೂನ್ಯಸ್ಥಲ
ಈ ಒಂಬತ್ತು ಮಹಾಲಿಂಗಸ್ಥಲಂಗಳು. ಇಂತೀ ಉಭಯಸ್ಥಲವು ಕೂಡಿ 13 ಸ್ಥಲಂಗಳಾಗಿ
ಆಜ್ಞಾಚಕ್ರದಲ್ಲಿ ಸಂಬಂಧವಾಗಿರ್ಪುವು. ಇಂತೀ 101 ಸ್ಥಲಕುಳಂಗಳು ಆಧಾರ
ಸ್ವಾಧಿಷಾ*ನ
ಮಣಿಪೂರಕ
ಅನಾಹತ
ವಿಶುದ್ಧಿ
ಆಜ್ಞಾ
ಎಂಬ ಆರು ಚಕ್ರಂಗಳಲ್ಲಿ ಸಂಬಂಧಿಸಿ
ಆ ಆರು ಚಕ್ರಂಗಳನು ನಿಃಷ್ಕಲಶೂನ್ಯನಿರಂಜನವೆಂಬ ಮೂರು ಚಕ್ರಂಗಳಲ್ಲಿ ಅಡಗಿಸಿ
ಆ ಮೂರು ಚಕ್ರಂಗಳೆಂಬ ಮಂಟಪದಲ್ಲಿ ಗುರುಲಿಂಗಜಂಗಮವ ಕುಳ್ಳಿರಿಸಿ
ನಿಷ್ಕಲಶೂನ್ಯ ನಿರಂಜನ ಭಕ್ತಿಯಿಂದರ್ಚಿಸಿ
ಆ ಗುರುಲಿಂಗಜಂಗಮದ ಘನಪ್ರಸಾದವ ಪಡೆದು ಆ ಗುರುಲಿಂಗಜಂಗಮವು ಒಂದಾದ ಮಹಾಘನ ಪರಬ್ರಹ್ಮದಲ್ಲಿ ಮನವಡಗಿ ಭಾವ ನಿಷ್ಪತ್ತಿಯಾಗಿ ಶರಧಿಯಲ್ಲಿ ಮುಳುಗಿದ ಪೂರ್ಣಕುಂಭದಂತಿರ್ಪ ಮಹಾಶರಣರ ಪರಮಗುರು ಬಸವರಾಜದೇವರ ದಿವ್ಯ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.