ವಿಷಯಕ್ಕೆ ಹೋಗು

ಕೊಂಡಡಗಿದನೊಬ್ಬ, ಕೊಟ್ಟರಸಿದನೊಬ್ಬನು. ಈರೇಳು

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಕೊಂಡಡಗಿದನೊಬ್ಬ
ಕೊಟ್ಟರಸಿದನೊಬ್ಬನು. ಈರೇಳು ಭುವನವರಿಯಲು ವೃಷಭನು ವಿಸ್ಮಯಗೊಂಡನು ! ಭೂಮಿಯ ಜಲಗುಗರ್ಚಿ ಹೇಮರಸವನರಸುವಂತೆ ಅರಸುತ್ತಿದ್ದನಯ್ಯಾ ಜಂಗಮದೊಳಗೆ ಲಿಂಗವನು
ಏಕೋನಿಷೆ*ಯ ಕಂಡಡೆ ಎತ್ತಿಕೊಂಡನಯ್ಯಾ ಶಿವನು ! ಜಪಸಮಾಧಿಯೊಳಗೆ ಅಡಗಿದ್ದಡೆ
ಲಿಂಗವಾಗಿ ಬಂದರೀ ಪ್ರಭುದೇವರು. ನಿಮ್ಮಡಿಗಳು ಅಸಂಖ್ಯಾತರಿಗೆ ಮಾಡಿದ ಸಯಧಾನವ ನೀನೊಬ್ಬನೆ ಆರಿಸಿಕೊಟ್ಟಂದು ಕೂಡಲಚೆನ್ನಸಂಗಯ್ಯನಲ್ಲಿ ಲಿಂಗವೆಂದರಿದನಯ್ಯಾ ನಿಮ್ಮನು ನಮ್ಮ ಸಂಗನಬಸವಣ್ಣನು