ಕೊಂಡ ಆಹಾರದ ರಸವ

ವಿಕಿಸೋರ್ಸ್ದಿಂದ



Pages   (key to Page Status)   


ಕೊಂಡ ಆಹಾರದ ರಸವ ಕಟ್ಟಿ
ಯೋಗಿಗಳಾದೆವೆಂಬ ಭಂಡರು ನೀವು ಕೇಳಿರೊ. ಜೋಡು ದೇಹದ ಮಲಿನವ ಕಟ್ಟಿ ಮಾಯೆಯ ಗೆದ್ದಿಹೆವೆಂಬರು. ಬಿಂದುವಿನ ಸಂಚವನಿವರೆತ್ತ ಬಲ್ಲರು ? ಮನದ ಮಲಿನವೆ ಮಾಯೆ
ಮನದ ಸಂಚವೆ ಬಿಂದು. ಇಂತಪ್ಪ ಬಿಂದುವ ಕಟ್ಟಿ ಮಾಯೆಯ ಗೆಲಲರಿಯದವರು ಅವರೆತ್ತಣ ಯೋಗಿಗಳು ಗುಹೇಶ್ವರಾ ?