ಕೋಟಿ ರುದ್ರರು ಮಡಿದರು,

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಕೋಟಿ ರುದ್ರರು ಮಡಿದರು
ಅನಂತಕೋಟಿ ಬ್ರಹ್ಮವಿಷ್ಣುಗಳು ಮಡಿದರು
ನರರು
ಸುರರು
ಗರುಡ ಗಂಧರ್ವರು ಮಡಿದರು. ಅವರ ಮಡಿಯೊಳಗೆ ತಾನಾಗದೆ
ತಾನೊಂದು ಹೊಸ ಬಿಳಿದ ಮಡಿಮಾಡಿ ಎನಗುಡಕೊಟ್ಟು ಎನ್ನ ಬದುಕಿಸಿಕೊಂಡಾತ
ಮಡಿವಾಳ ಕಾಣಾ
ಕೂಡಲಸಂಗಮದೇವಾ.