ಕೋಡಗನ ಅಣಲ ಸಂಚದಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕೋಡಗನ ಅಣಲ ಸಂಚದಲ್ಲಿ ಎರಡು ದಾಡೆ ಹುಟ್ಟಿದವು ನೋಡಾ. ಆ ದಾಡೆಯ ಸಂಚಲದಲ್ಲಿ ಮೂರುಲೋಕವೆಲ್ಲ ಆಳುತ್ತ ಮುಳುಗುತ್ತಿದೆ ನೋಡಾ. ತ್ರೆ ೈಜಗದ ಮಸ್ತಕವನೊಡದು ನೀವು ಮೂಡಲು ಈರೇಳು ಲೋಕವೆಲ್ಲ ಬೆಳಗಾಯಿತ್ತು ನೋಡಾ. ಈರೇಳು ಲೋಕವನೊಳಕೊಂಡ ಬೆಳಗು ತಾನೆಂದರಿಯಲು ಕೋಡಗನಣಲಸಂಚದ ದಾಡೆ ಮುರಿಯಿತ್ತು; ಮೂರು ಲೋಕದ ವೇದನೆ ಮಾದುದ ಕಂಡೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.