ಕ್ರಿಯೆಯೆ ಜ್ಞಾನ, ಆ
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಕ್ರಿಯೆಯೆ ಜ್ಞಾನ
ಆ ಜ್ಞಾನವೆ ಕ್ರಿಯೆ. ಜ್ಞಾನವೆಂದಡೆ ತಿಳಿಯುವುದು
ಕ್ರಿಯೆಯೆಂದಡೆ ತಿಳಿದಂತೆ ಮಾಡುವುದು ಪರಸ್ತ್ರೀಯ ಭೋಗಿಸಬಾರದೆಂಬುದೆ ಜ್ಞಾನ; ಅದರಂತೆ ಆಚರಿಸುವುದೆ ಕ್ರಿಯೆ. ಅಂತು ಆಚರಿಸದಿದ್ದಡೆ ಅದೆ ಅಜ್ಞಾನ ನೋಡಾ
ಕೂಡಲಚೆನ್ನಸಂಗಮದೇವಾ