ವಿಷಯಕ್ಕೆ ಹೋಗು

ಕ್ರಿಯೆ ಜಡವೆಂಬರು, ಜ್ಞಾನ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಕ್ರಿಯೆ ಜಡವೆಂಬರು
ಜ್ಞಾನ ಅಜಡವೆಂಬರು ಅದೆಂತಯ್ಯಾ ? ನೀತಿಯ ಹೇಳಿದುದು ಜಡವೆ ? ಕಷ್ಟವಿಲ್ಲದೆ ಬಂದಂತೆ ಬೊಗಳಿ ಭೋಗಿಸಿ ಭವಕ್ಕೆ ಹೋಗುವುದು ಅಜಡವೆ ? ಕ್ರಿಯಾ-ಜ್ಞಾನವೆಂಬ ಉಭಯ ಶಬ್ದಾರ್ಥವನರಿಯದೆ ಕಂಡ ಕಂಡ ಹಾಗೆ ಬೊಗಳುವ ಹೊಲೆಮಾದಿಗರನು ಏನೆಂಬೆ ಕೂಡಲಚೆನ್ನಸಂಗಮದೇವಾ ?