ಕ್ರೀಯಿಂದಾದುದು ಲಿಂಗವೆಂದೆಂಬರು ಕ್ರೀಯಿಂದಾದುದು ಜಂಗಮವೆಂದೆಂಬರು. ಕ್ರೀಯಿಂದಾದುದು ಲಿಂಗವಲ್ಲ ಜಂಗಮವಲ್ಲ ಜಂಗಮವುಂಟು ಜಂಗಮವಲ್ಲ. ಜಂಗಮ ಸುನಾದರೂಪು ಕೂಡಲಚೆನ್ನಸಂಗಮದೇವಾ.