ಕ್ರೀಯೆಂಬುದನಾರು ಬಲ್ಲರು ?
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಕ್ರೀಯೆಂಬುದನಾರು ಬಲ್ಲರು ? ಅಂಗಲಿಂಗವೆಂಬ ಸಂದಳಿಯದುದು ಕ್ರೀಯಲ್ಲ
ಲಿಂಗಜಂಗಮವೆಂಬ ಸಂದಳಿಯದುದು ಕ್ರೀಯಲ್ಲ. ಅರ್ಪಿತ ಅನರ್ಪಿತವೆಂಬ ಸಂದಳಿಯದುದು ಕ್ರೀಯಲ್ಲ. ಅಲ್ಲ ಎನಲಿಲ್ಲ. ಇಂತೀ ಕ್ರೀಯೊಳಗಿದ್ದ ನಿಷ್ಕ್ರೀವಂತರ ತೋರಾ. ನಿಷ್ಕ್ಟೀಯೆಂಬುದಾವುದು ? ಕ್ರೀ ತನು
ನಿಷ್ಕ್ರೀ ಪ್ರಾಣ
ತನುವೆ ಲಿಂಗ
ಪ್ರಾಣವೆ ಜಂಗಮ. ತನುವ ಸಯವ ಮಾಡಿ
ಆ ಪ್ರಾಣಲಿಂಗಜಂಗಮಕ್ಕೆ ಮನವನರ್ಪಿಸುವ ನಿಷ್ಕ್ರೀಪ್ರಸಾದಿಗಳ ತೋರಾ. ಕೂಡಲಚೆನ್ನಸಂಗಮದೇವಾ ನಿಮ್ಮ ಧರ್ಮ
ನಿಮ್ಮ ಧರ್ಮ