ಕ್ಷೀರಕ್ಕೆ ತವರಾಜವ ಹೊಯ್ದಲ್ಲಿ ಬೇರೆ ಲೇಸು ಕಷ್ಟವನರಸುವರೆ ? ಅಂಗಕ್ಕೆ ತಿಮಿರವಾದಲ್ಲಿ ಅಂಗುಲ ಮುಟ್ಟಿ ತಿಮಿರದ ಅಂಗವ ಕೆಡಿಸಿದಡೆ ಅಂಗಕ್ಕೆ ಮಿಥ್ಯವುಂಟೆ ? ಎನ್ನಂಗವು ತಾನಾದ ಕಾರಣ `ನೀನು' ಎಂಬ ನಾಮ ಬೇರಿಲ್ಲ ಗುಹೇಶ್ವರಲಿಂಗವು ನೀನಾದ ಕಾರಣ.