Library-logo-blue-outline.png
View-refresh.svg
Transclusion_Status_Detection_Tool

ಕ್ಷೀರದ ? ರುಚಿಯ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಕ್ಷೀರದ ರುಚಿಯ ಹಂಸಬಲ್ಲುದಲ್ಲದೆ
ನೀರೊಳಗಿರ್ಪ ನೀರಗೋಳಿ ಎತ್ತಬಲ್ಲುದಯ್ಯಾ ? ಕಬ್ಬಿನ ಸ್ವಾದವ ಮದಗಜಬಲ್ಲುದಲ್ಲದೆ
ಸೋಗೆಯ ತಿಂಬ ಕುರಿ ಎತ್ತಬಲ್ಲುದಯ್ಯಾ ? ಪುಷ್ಪದ ಪರಿಮಳವ ಭೃಂಗಬಲ್ಲುದಲ್ಲದೆ
ಮರಕಡಿಯುವ ಗುಂಗೆಯಹುಳ ಎತ್ತ ಬಲ್ಲುದಯ್ಯಾ ? ಆದಿಸ್ಥಳಕುಳದ ನಿರ್ಣಯವ ಅನಾದಿಶರಣ ಬಲ್ಲನಲ್ಲದೆ ಈ ಲೋಕದ ಗಾದೆಯ ಮನುಜರು ಎತ್ತ ಬಲ್ಲರಯ್ಯಾ ಅಖಂಡೇಶ್ವರಾ ?