ಕ್ಷೀರಸಾಗರದೊಳಗೆ ಓಲಾಡುತಿರ್ಪ ಸುಖಿ,

ವಿಕಿಸೋರ್ಸ್ದಿಂದ



Pages   (key to Page Status)   


ಕ್ಷೀರಸಾಗರದೊಳಗೆ ಓಲಾಡುತಿರ್ಪ ಸುಖಿ
ನೀರವಟ್ಟೆಯಕಟ್ಟಿ ನೆಳಲ ಕಡಿದು
ಏಳುಬಾವಿಯಲ್ಲಿ ನೆಗೆಯ
ಎರಡುಬಾವಿಯಲ್ಲಿ ಉಣ್ಣ ! ಬೇರೆ ಹೇಳುವಡೆ ; ಇಂತು ಅನುಭಾವವೆ ಪಂಚರಸವೆಂಬವನು ಪಂಚಮುಖದಲ್ಲಿ ಕಟ್ಟಿ ಪಂಚಪಂಚೈವರನೊಂದು ಮಾಡಿ ಅಂಚಟೆಯ ರೂಹಿಂಗೆ ಅರುವೆಯೊಂದನೆ ಹಾಸಿ_ ಇಂತು ಸಂಸಾರದ ನಿಲವು ನೋಡಾ. ಹಲ್ಲಿ ಉತ್ತರ ಬಾಗಿಲಲ್ಲಿ ಸರಗೆಯ್ಯಲು ಅಲ್ಲಿ ತೆಂಕಣ ಶಕುನವೊಂದಾಗಲು ಬಲ್ಲನಂಟರು ಬಂದು ಮುಂದೆ ನಿಜ ನಿಂದಿರಲು ಎಲ್ಲರು ಮೈಸಾಗಿಸಲು ಪಾದವ ಹಿಡಿಯೆ ತಲೆಗಳ ಹಿಡಿದು ಕೈಗಳಲ್ಲಿ ನೆಗಹುತ್ತಿರಲು ಎಲ್ಲರು ಹಾಡುತ್ತ ಹರಸುವ ಹರಕೆಯಿಂದ ದೈವ ದಳವೇರಿ ಕೂಡಲಚೆನ್ನಸಂಗಯ್ಯನೊಳಗೆ `ಬಸವಣ್ಣ ಶರಣೆನುತ ತಾನು ಹೊಕ್ಕ ಶರಣನು