ಖಂಡಿತಭಾವವಳಿದು ? ಅಖಂಡಬ್ರಹ್ಮದಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಖಂಡಿತಭಾವವಳಿದು ಅಖಂಡಬ್ರಹ್ಮದಲ್ಲಿ ಅವಿರಳ ಸಮರಸದಿಂದಡಗಿದ ಶರಣಂಗೆ ಜ್ಞಾನಕ್ರಿಯೆಯೆಂಬುದೇನೊ ? ಧ್ಯಾನಮೌನವೆಂಬುದೇನೊ ? ನೇಮ ನಿತ್ಯವೆಂಬುದೇನೊ ? ಜಪತಪವೆಂಬುದೇನೊ ? ಅರುಹು ಆಚಾರವೆಂಬುದೇನೊ ? ಕುರುಹು ಪೂಜೆಯೆಂಬುದೇನೊ ? ಇಂತೀ ಮೇರೆಯುಳ್ಳನ್ನಕ್ಕರ ಭಿನ್ನಫಲಪ್ರಾಪ್ತಿಯಲ್ಲದೆ
ಮುಂದೆ ಅವಿರಳ ಸಮರಸ ನಿಜೈಕ್ಯ ನಿರವಯಲ ಪದವಿನ್ನೆಲ್ಲಿಯದೊ ? ಇದನರಿದು ಇಂತಿವೆಲ್ಲವು ಹಾಳು ಸಂಕಲ್ಪ
ವಿಪರೀತ ಭ್ರಾಂತಿ
ಅಜ್ಞಾನವೆಂದು ತಿಳಿದು
ಇವನೆಲ್ಲವ ವಿಭಾಗಿಸಿ ಕಳೆದು
ಬಚ್ಚಬರಿಯ ಬಯಲಬ್ರಹ್ಮವೆ ತನ್ನ ನಿಜದ ನಿಲವೆಂದು ತಿಳಿದು
ದಗ್ಧಪಟನ್ಯಾಯದಂತೆ ದೇಹವಿರ್ದು ನಿರ್ದೇಹಿಯಾಗಿರ್ದನಯ್ಯಾ ನಿಮ್ಮ ಶರಣ ಅಖಂಡೇಶ್ವರಾ.