ಗಂಗಾಸ್ಥಾನ ಕೋಟಾನುಕೋಟಿಗಿಂದ ವಿಭೂತಿಯಸ್ನಾನವಧಿಕ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗಂಗಾಸ್ಥಾನ ಕೋಟಾನುಕೋಟಿಗಿಂದ ವಿಭೂತಿಯಸ್ನಾನವಧಿಕ ನೋಡಾ. ಮಂತ್ರಸ್ನಾನ ಕೋಟಾನುಕೋಟಿಗಿಂದ ವಿಭೂತಿಯಸ್ನಾನವಧಿಕ ನೋಡಾ. ವಿಭೂತಿರೇಣುಮಾತ್ರದಿಂದ ರುದ್ರನಪ್ಪುದು ತಪ್ಪುದು ನೋಡಾ. ಸರ್ವಾಂಗದಲ್ಲಿ ಶ್ರೀ ವಿಭೂತಿಯ ಉದ್ಧೂಳನವ ಮಾಡಿದಾತನ- ನೇನೆಂದುಪಮಿಸುವೆನಯ್ಯ ಆ ಮಹಾತ್ಮನ? ಆತನು ಜಗತ್ ಪಾವನನು ನೋಡಾ! ಇಂತಪ್ಪ ಪವಿತ್ರಕಾಯಂಗೆ ನಮೋನಮೋಯೆಂಬೆನು ಕಾಣ
ಆತನು ಪರಮಾತ್ಮಸ್ವರೂಪನಾದ ಕಾರಣ. ಆತನು ಪಂಚಬ್ರಹ್ಮಸ್ವರೂಪನಾದ ಕಾರಣ
ಆ ಮಹೇಶ್ವರಂಗೆ ಶರಣೆಂದು ಬದುಕಿದೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.