ಗಂಡಗಿಂದ ಹೆಂಡತಿ ಮೊದಲೇ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗಂಡಗಿಂದ ಹೆಂಡತಿ ಮೊದಲೇ ಹುಟ್ಟಿದರು ಆ ಗಂಡಗಿಂದ ಕಿರಿಯಳಲ್ಲದೆ ಹಿರಿಯಳಲ್ಲವಯ್ಯ. ಗುರುವಿಗಿಂದ ಶಿಷ್ಯ ಅರುಹುಳ್ಳವನಾದರು
ಆ ಗುರುವಿಂಗೆ ಭೃತ್ಯನಲ್ಲದೆ ಕರ್ತನಲ್ಲವಯ್ಯ. ಕುದುರೆಯ ಹಿಡಿಯ ಹೇಳಿದರೆ ರಾವುತಿಕೆಯ ಮಾಡಿದರೆ ಒಪ್ಪುವರೇ? ಆಳಾಗಿದ್ದು ಆರಸಾಗಿರ್ದೆನೆಂದರೆ ಒಪ್ಪುವರೇ? ಮಗನೇನು ತಂದೆಯಾಗಬಲ್ಲನೇ? ಇದುಕಾರಣ
ಶಿಷ್ಯಂಗೆ ಭಯಭಕ್ತಿ ಕಿಂಕುರ್ವಾಣವೆ ಇರಬೇಕು. ಈ ಗುಣವುಳ್ಳರೆ ಆ ಶಿಷ್ಯನೆ ಗುರುವಪ್ಪುದು ತಪ್ಪದು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.