ಗಂಡಭೇರುಂಡನೆಂಬ ಪಕ್ಷಿಗೆ ತಲೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗಂಡಭೇರುಂಡನೆಂಬ ಪಕ್ಷಿಗೆ ತಲೆ ಎರಡು
ದೇಹವೊಂದು. ಒಂದು ತಲೆಯಲ್ಲಿ ಹಾಲನೆರೆದು
ಒಂದು ತಲೆಯಲ್ಲಿ ವಿಷವನೆರೆದಡೆ
ಆ ಪಕ್ಷಿಗೆ ಮರಣವಲ್ಲದೆ ಜಯವಪ್ಪುದೇ ಅಯ್ಯಾ ? ಲಿಂಗವ ಪೂಜಿಸಿ ಜಂಗಮವ ಮರೆದಡೆ ಕುಂಭಿನೀನರಕ ತಪ್ಪುದು ಕಾಣಾ ಕೂಡಲಚೆನ್ನಸಂಗಮದೇವಯ್ಯಾ