ಗಗನಕ್ಕೆ ನಿಚ್ಚಣಿಕೆಯನಿಕ್ಕಿದವರುಂಟೆ ?

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗಗನಕ್ಕೆ ನಿಚ್ಚಣಿಕೆಯನಿಕ್ಕಿದವರುಂಟೆ ? ವಾಯುವಿನ ಸ್ಥಳವನರಿದವರುಂಟೆ ? ಅಂಬುಧಿಯ ಗುಣ್ಪವನಳೆದವರುಂಟೆ ? ಲಿಂಗದ ಪ್ರಮಾಣ ಹೇಳಬಹುದೆ ? ಚಂದ್ರಮಂಡಲ ತಾರಾಮಂಡಲ ಸೂರ್ಯಮಂಡಲ ಇತ್ತಿತ್ತಲಯ್ಯಾ ! ಪಂಚಮುಖವಾಗಿ
ನೊಸಲಕಣ್ಣು ಚತುರ್ಭುಜ ಅಣುಮಾತ್ರವೆ ? ಒಬ್ಬ ಶರಣನಾಗಿ ಗುಹೇಶ್ವರನೆಂಬ ಘನನೆಲೆಯ ಬಲ್ಲಡೆ ಅಲ್ಲಿಂದತ್ತ ಶರಣು ಶರಣು.