ಗರ್ಭದೊಳಗಣ ಶಿಶುವಿಂಗೆ ತಾಯಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗರ್ಭದೊಳಗಣ ಶಿಶುವಿಂಗೆ ತಾಯಿ ಉಂಡಲ್ಲಿಯೆ ಪರಿಣಾಮವಲ್ಲದೆ
ಬೇರೊಂದೆಡೆಮಾಡಿ ಉಣ್ಣೆಂದರೆ ಉಣ್ಣಬಲ್ಲುದೇ ಅಯ್ಯ? ಪ್ರಾಣದೊಳಗೆ ಪ್ರಾಣವಾಗಿಪ್ಪ ಲಿಂಗಕ್ಕೆ
ಆ ಶರಣನುಂಡಲ್ಲಿಯೆ ತೃಪ್ತಿಯಲ್ಲದೆ
ಬೇರೆ ಊಡಿಸಿದರೆ ಉಣಬಲ್ಲುದೇ ಅಯ್ಯ? ಸಂಯೋಗ ವಿಯೋಂಗಗಳಲ್ಲಿ
ತಟ್ಟುವ ಮುಟ್ಟುವ
ಅಣುಬಿಂದು ಸುಖಾರ್ಥವನು
ಅರಿವವನು
ಅರ್ಪಿಸುವವನು
ಭೋಗಿಸುವವನು
ನೀನೆಯಲ್ಲದೆ
ನಾ(ನ)ಲ್ಲ ನೋಡಾ. ಲಿಂಗದೊಳಗಿರ್ದು
ಲಿಂಗಕ್ಕೆ ಲಿಂಗವನರ್ಪಿಸಿ
ಲಿಂಗಪ್ರಸಾದದೊಳಗೆ
ಒಡಗೂಡಿ ಮಹಾಪ್ರಸಾದಿಯಾಗಿ
ಮಹಕ್ಕೆ ಮಹವಾಗಿ
ಪರಕ್ಕೆ ಪರವಾಗಿ
ಸಾವಧಾನ ಪ್ರಸಾದಿಯಾಗಿರ್ದೇನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.