Library-logo-blue-outline.png
View-refresh.svg
Transclusion_Status_Detection_Tool

ಗರ್ವಾಹಂಕಾರವಳಿದು ಲಿಂಗೈಕ್ಯಂಗೆ ಸರ್ವಕರಣಂಗಳು

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಗರ್ವಾಹಂಕಾರವಳಿದು ಸರ್ವಕರಣಂಗಳು ತರಹರವಾಗಿ ಸರ್ವಾಂಗದಲ್ಲಿ ಸರ್ವಾಚಾರ ನೆಲೆಗೊಂಡ ಲಿಂಗೈಕ್ಯಂಗೆ ಅಖಂಡಪರಿಪೂರ್ಣ ಮಹಾಲಿಂಗವೆ ಭಾಜನವಾಗಿ
ಆ ಘನಮಹಾಲಿಂಗಕ್ಕೆ ಆ ನಿಜಲಿಂಗೈಕ್ಯನೆ ಭಾಜನವಾಗಿ
ಅಂಗಲಿಂಗವೆಂಬ ಉಭಯಭಾವವಳಿದು ಕ್ಷೀರ ಕ್ಷೀರವ ಬೆರೆದಂತೆ ಅವಿರಳ ಸಮರಸವಾಗಿರ್ಪ ಲಿಂಗೈಕ್ಯಂಗೆ ಏಕಭಾಜನವಲ್ಲದೆ ಉಳಿದವರಿಗೆಲ್ಲಿಯದಯ್ಯಾ ಅಖಂಡೇಶ್ವರಾ ?