ಗಾಡಿಗ ಡಿಂಬುಗಂಗೆ ಚಿಕ್ಕುಮುಟ್ಟಿಗೆ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಗಾಡಿಗ ಡಿಂಬುಗಂಗೆ ಚಿಕ್ಕುಮುಟ್ಟಿಗೆ
ಹಸುರಂಬಲಿಮುಟ್ಟಿಗೆ
ಹುರಿಬುತ್ತಿಯ ಬೇಡಿ
ಮನುಷ್ಯರ ಪಿಡಿದು ಪೀಡಿಸಿ
ತಮ್ಮ ಬಸುರ್ಗೆ ಕಾಣದೆ
ಈಡಾಡಿದ ಕೂಳಂಬಲಿಯನಾಯ್ದು ಕುರುಕುವ ಹೇಸಿ ದೈವಂಗಳ ಬೇಡಿ ಬೇಡಿ ನಿರರ್ಥ ಕೆಡಬೇಡ
ಎಲವೋ
ಕೂಡಲಸಂಗಮದೇವರ ನೆರೆನಂಬುವುದೆಲವೊ.