ವಿಷಯಕ್ಕೆ ಹೋಗು

ಗಿಳಿಯು ಪಂಜರದೊಳಿಲ್ಲ

ವಿಕಿಸೋರ್ಸ್ದಿಂದ


ಗಿಳಿಯು ಪಂಜರದೊಳಿಲ್ಲ ಶ್ರೀ ರಾಮ ಬರಿದೆ ಪಂಜರವಾಯ್ತಲ್ಲ ಅಕ್ಕ ನಿನ್ನ ಮಾತು ಕೇಳಿ ರಾಮ ರಾಮ. ಚಿಕ್ಕದೊಂದು ಗಿಳಿಯ ಸಾಕಿ ರಾಮ ರಾಮ ಅಕ್ಕ ನಿಲ್ಲದ ವೇಳೆ ರಾಮ ರಾಮ ಬೆಕ್ಕು ಕೊಂಡು ಹೋಯಿತಯ್ಯೋ ರಾಮ ರಾಮ

ಮುಪ್ಪಾಗ ಬೆಣ್ಣೆಯನ್ನು ರಾಮ ರಾಮ ತಪ್ಪದೇ ನಾ ಹಾಕಿ ಸಾಕಿದೆ ರಾಮ ರಾಮ ಒಪ್ಪದಿಂದ ಗಿಳಿಯು ಈಗ ರಾಮ ರಾಮ ತೆಪ್ಪನೆ ಹಾರಿ ಹೋಯಿತಯ್ಯೋ ರಾಮ ರಾಮ

ರಾಮ ಎನ್ನುವ ಗಿಳಿ ರಾಮ ರಾಮ ಕೋಮಲ ಕಾಯದ ಗಿಳಿ ರಾಮ ರಾಮ ಸಮಾಜ ಪೋಷಕ ತಾನು ರಾಮ ರಾಮ ಪ್ರೇಮದಿ ಸಾಕಿದ ಗಿಳಿ ರಾಮ ರಾಮ

ಅಂಗೈಯಲ್ಲಿ ಆಡೋ ಗಿಳಿ ರಾಮ ರಾಮ ಮುಂಗೈ ಮೇಲಣ ಗಿಳಿ ರಾಮ ರಾಮ ರಂಗ ವಿಠ್ಠಲನಂತೆ ರಾಮ ರಾಮ ರಂಗದಿ ಭಜಿಸುವ ಗಿಳಿ ರಾಮ ರಾಮ