ಗುರುಕಾರುಣ್ಯವ ಪಡೆದೆವೆಂಬರು; ಒಬ್ಬನಾಗಾದೆಹೆನೆಂಬ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗುರುಕಾರುಣ್ಯವ ಪಡೆದೆವೆಂಬರು; ಒಬ್ಬನಾಗಾದೆಹೆನೆಂಬ
ಒಬ್ಬ ಚೇಗೆಯಾದೆಹೆನೆಂಬ ಇವರಿಬ್ಬರು ಪಿಂಡಭೋಗಿಗಳು
ಭಕ್ತಂಗೆ ಈ ಆಗೂ ಇಲ್ಲ
ಈ ಚೇಗೆಯೂ ಇಲ್ಲ. ಗುರುದ್ರವ್ಯಾವನೊಪ್ಪಿಸಿದನಾಗಿ. ``ಗುರುದ್ರವ್ಯಾಭಿಲಾಷೇಣ ಗುರುದ್ರವ್ಯಸ್ಯ ವಂಚನಂ ಯಃ ಕುರ್ಯಾದ್ಗುರೋರ್ಭಕ್ತಃಸ ಭವೇತ್ ಬ್ರಹ್ಮರಾಕ್ಷಸಃ ' ಎಂದುದಾಗಿ
ಗುರುದ್ರವ್ಯವಾವುದೆಂದಡೆ; ದೈಹಿಕದ್ರವ್ಯ
¨sõ್ಞತಿಕದ್ರವ್ಯ
ಆತ್ಮದ್ರವ್ಯ
ಇಂದ್ರಿಯದ್ರವ್ಯ
ಜ್ಞಾನದ್ರವ್ಯ_ ಈ ಪಂಚದ್ರವ್ಯವನು ಉಭಯವಳಿದು ಷೋಡಶೋಪಚಾರದಲ್ಲಿ ಅರ್ಪಿಸಬಲ್ಲರೆ ಕೂಡಲಚೆನ್ನಸಂಗಯ್ಯನಲ್ಲಿ ಆತನೆ ಗುರುಭಕ್ತ.