ವಿಷಯಕ್ಕೆ ಹೋಗು

ಗುರುದೇವನೇ ಮಹಾದೇವನು; ಗುರುದೇವನೇ

ವಿಕಿಸೋರ್ಸ್ದಿಂದ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಗುರುದೇವನೇ ಮಹಾದೇವನು; ಗುರುದೇವನೇ ಸದಾಶಿವನು ಗುರುದೇವನೇ ಪರತತ್ವವು; ಆ ಪರಶಿವ ತಾನೆ ಗುರುರೂಪಾಗಿ ವರ್ತಿಸಿದನು
ಶಿಷ್ಯದೀಕ್ಷಾಕಾರಣ. ಆ ಶ್ರೀಗುರು
ಶಿಷ್ಯನ ಮಸ್ತಕದಲ್ಲಿ ತನ್ನ ಹಸ್ತಕಮಲವನಿರಿಸಿ
ಈ ಪ್ರಕಾರವಪ್ಪ ಲಿಂಗಕಳೆಯ ಪ್ರತಿಷೆ*ಯಂ ಮಾಡಿದನಾಗಿ
ಆ ಗುರುವಿನ ಹಸ್ತದಿಂದ ಆ ಕಳೆ ಹುಟ್ಟಿ
ಅದೇ ಕರಸ್ಥಲಕ್ಕೆ ಇಷ್ಟಲಿಂಗವಾಯಿತ್ತು; ಮನಸ್ಥಲಕ್ಕೆ ಪ್ರಾಣಲಿಂಗವಾಯಿತ್ತು. ಭಾವಭರಿತವಾಗಿ ಭಾವಲಿಂಗವಾಯಿತ್ತು. ಇಷ್ಟ ಪ್ರಾಣ ಭಾವವೆಂಬ ತ್ರಿವಿಧಲಿಂಗವು ತಾನೆ ಆಚಾರಲಿಂಗ
ಗುರುಲಿಂಗ
ಶಿವಲಿಂಗ
ಜಂಗಮಲಿಂಗ
ಪ್ರಸಾದಲಿಂಗ
ಮಹಾಲಿಂಗವೆಂದು ಆರುತೆರನಾಯಿತ್ತು. ಆಚಾರಲಿಂಗದಲ್ಲಿಯೆ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ
ಮಹಾಲಿಂಗ ಈ ಲಿಂಗಪಂಚಕವು ಗರ್ಭೀಕೃತವಾಗಿ ಆಚಾರಲಿಂಗವೆಂದು ಕ್ರಿಯಾಲಿಂಗವೆಂದು ಒಂದೇ ಪರಿಯಾಯವಾಗಿ ಕ್ರಿಯಾಲಿಂಗವೆಂದು ಇಷ್ಟಲಿಂಗವೆಂದು ಒಂದೇ ಪರಿಯಾಯವಾಗಿ ಇಂತಿವೆಲ್ಲವನೊಳಕೊಂಡು ನಿನ್ನ ಕರಸ್ಥಲಕ್ಕೆ ಬಂದಿತ್ತು ವಸ್ತು. ಈ ಕರಸ್ಥಲದ ಮಹಾಘನದ ನಿಲವನು ಹೀಗೆಂದು ಅರಿವುದೆಂದನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.