ಗುರುದ್ರೋಹಿಯಾದವನ ಮುಖವ ನೋಡಲಾಗದು,
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಗುರುದ್ರೋಹಿಯಾದವನ ಮುಖವ ನೋಡಲಾಗದು
ಮತ್ತೆ ನೋಡಬಹುದು
ಏಕೆ? ಮುಂದೆ ಲಿಂಗವಿಪ್ಪುದಾಗಿ. ಲಿಂಗದ್ರೋಹಿಯಾದವನ ಮುಖವ ನೋಡಲಾಗದು
ಮತ್ತೆ ನೋಡಬಹುದು
ಏಕೆ? ಮುಂದೆ ಜಂಗಮವಿಪ್ಪುದಾಗಿ ಜಂಗಮದ್ರೋಹಿಯಾದವನ ಮುಖವ ನೋಡಲಾಗದು
ಮತ್ತೆ ನೊಡಬಹುದು ಏಕೆ ಮುಂದೆ ಪ್ರಸಾದವಿಪ್ಪುದಾಗಿ. ಪ್ರಸಾದದ್ರೋಹಿಯಾದವನ ಮುಖವ ನೋಡಲಾಗದು ಏಕೆ? ಕೂಡಲಚೆನ್ನಸಂಗಯ್ಯನ ಪ್ರಸಾದವಿರಹಿತವಾಗಿ ಪರವಿಲ್ಲದ ಕಾರಣ