ಗುರುಪದವ ಮಹತ್ತುಪದವೆಂದು ನುಡಿದು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗುರುಪದವ ಮಹತ್ತುಪದವೆಂದು ನುಡಿದು
ನಡೆಯಲರಿಯದ ತುಡುಗುಣಿಗಳು ನೀವು ಕೇಳಿರೊ; ಗುರುಪದವಾವುದೆಂಬುದರಿಯಿರಿ
ಮಹತ್ತುಪದವಾವುದೆಂಬುದ ಮುನ್ನವೆ ಅರಿಯಿರಿ. ಆಚಾರಂ ಗುರುಪದ_ಎಂಬುದನರಿದು
ಅಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಂಗಳನತಿಗಳೆದು
ಈಷಣತ್ರಯವೆಂಬ ವಾಸನೆಯ ಹೊದ್ದದೆ
ದಾಸಿ
ವೇಸಿ
ಪರಸ್ತ್ರೀಯರ ಸಂಗವೆಂಬ ಹೇಸಿಕೆಯ ಮನದಲ್ಲಿ ನೆನೆಯದೆ
ಪತಿತಾಶ್ರಮಾಶ್ರಿತನಾಗದೆ
ಭವಭಾರಿ ಶೈವಕ್ಷೇತ್ರಂಗಳಂ ಹೊದ್ದದೆ
ಭವಿಶೈವದೈವಂಗಳನಾರಾಧಿಸದೆ
ಭವಿಯನಾಶ್ರಯಿಸದೆ ಭವಿಸಂಗ
ಭವಿಪಙಫ್ತೆ
ಭವಿದೃಷ್ಟಿ
ಭವಿಗೇಹಾನ್ನ
ಭವಿತತ್ಸಂಭಾಷಣೆಯಂ ಬಿಟ್ಟು ಭಕ್ತಾಚಾರ ಸದಾಚಾರವಾಗಿಪ್ಪುದೆ ಗುರುಪದ. ಇನ್ನು ಮಹತ್ತುಪದವಾವುದೆಂದಡೆ; ಷಟ್‍ಸ್ಥಲಾಚಾರಉದ್ಧಾರಂ ಮನ್ಮತ್ವಂತು ಕಥ್ಯತೇ ಎಂದುದಾಗಿ
ಗುರುಲಿಂಗ ಜಂಗಮಲಿಂಗ ಪಾದೋದಕ ಪ್ರಸಾದ ಭಕ್ತಾಚಾರಂಗಳನುದ್ಧರಿಸುತ್ತ
ಎಲ್ಲಿ ಗುರು ಎಲ್ಲಿ ಲಿಂಗ ಎಲ್ಲಿ ಜಂಗಮ ಎಲ್ಲಿ ಪಾದೋದಕ ಎಲ್ಲಿ ಪ್ರಸಾದ ಎಲ್ಲಿ ಭಕ್ತಾಚಾರವಿದ್ದಲ್ಲಿಯೇ ಹೊಕ್ಕು
ಅವರೊಕ್ಕುದ ಕೊಂಡು ನಡೆಯಬಲ್ಲಡೆ ಮಹತ್ತುಪದ
ಇನಿತಿಲ್ಲದೆ ಗುರುವನತಿಗಳೆದು ಗುರುದ್ರೋಹಿಗಳಾಗಿ
ಲಿಂಗವನತಿಗಳೆದು ಲಿಂಗದ್ರೋಹಿಗಳಾಗಿ
ಜಂಗಮವನತಿಗಳೆದು ಜಂಗಮದ್ರೋಹಿಗಳಾಗಿ
ಆಚಾರವನತಿಗಳೆದು ಭಕ್ತಾಚಾರದ್ರೋಹಿಗಳಾಗಿ
ಹೊನ್ನು ಹೆಣ್ಣು ಮಣ್ಣಿಗಾಗಿ ಹೊರವೇಷವ ತೊಟ್ಟು
ಭಕ್ತಜಂಗಮದ ಅರ್ಥಪ್ರಾಣಂಗಳಿಗಳುಪಿ
ತೊತ್ತು ಸೊಳೆಯರೆಂಜಲ ತಿಂದು
ಮತ್ತೆ ಗುರುಪದ ಮಹತ್ತುಪದವೆಂದು ತಪ್ಪಿ ಬಗ?ುವ ಶ್ವಾನಜಂಗುಳಿಗಳ ಜಂಗಮವೆಂದಾರಾಧಿಸಿ
ಪ್ರಸಾದವ ಕೊ?್ಳ ಸಲ್ಲದು ಕಾಣಾ
ಕೂಡಲಚೆನ್ನಸಂಗಮದೇವಾ