ಗುರುಪ್ರಸಾದಕ್ಕೆ ಹೇಸುವರು, ಲಿಂಗಪ್ರಸಾದಕ್ಕೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗುರುಪ್ರಸಾದಕ್ಕೆ ಹೇಸುವರು
ಲಿಂಗಪ್ರಸಾದಕ್ಕೆ ಹೇಸುವರು
ಜಂಗಮ ಪ್ರಸಾದಕ್ಕೆ ಹೇಸುರರು
ಭಕ್ತಪ್ರಸಾದಕ್ಕೆ ಹೇಸುವರು. ಹೊಲತಿ ಮಾದಿಗಿತ್ತಿ ಬಲ್ಲವಳಾದರೆ
ಹಲವು ಪರಿಯಲ್ಲಿ ಅವಳೆಂಜಲ ತಿನುತಿಪ್ಪರು ನೋಡಾ ಜಗ. ಹದಿನೆಂಟು ಜಾತಿಯ ಎಂಜಲ ಹೇಹವಿಲ್ಲದೆ ತಿಂಬ ಭವಜಾತಿಗಳಿಗೆ ಪ್ರಸಾದ ದೊರಕೊಂಬುದೆ? ದೊರಕೊಳ್ಳದು. ಆದೇನುಕಾರಣವೆಂದಡೆ: ಭವಭವದಲ್ಲಿ ಯೋನಿಚಕ್ರದಲ್ಲಿ ತಿರುಗುತ್ತಿಪ್ಪರಾಗಿ. ಈ ಅಶುದ್ಧಜೀವಿಗಳಿಗೆ ಶುದ್ಧವಹ ಶಿವಪ್ರಸಾದದಲ್ಲಿ ಸಂಬಂಧ ಸಮನಿಸದು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.