ಗುರುಭಕ್ತನಾದಲ್ಲಿ ತ್ರಿವಿಧಾಂಗ ಘಟಧರ್ಮವಳಿದು,
ಗೋಚರ
ಲೇಖಕರು: ಏಕಾಂತ ರಾಮಿ ತಂದೆ
ಶೀರ್ಷಿಕೆ: vachana saahitya
ವರ್ಷ: 1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಗುರುಭಕ್ತನಾದಲ್ಲಿ ಘಟಧರ್ಮವಳಿದು
ಲಿಂಗಭಕ್ತನಾದಲ್ಲಿ ಸಂಚಲ ನಿಂದು
ಜಂಗಮಭಕ್ತನಾದಲ್ಲಿ ತ್ರಿವಿಧಾಂಗ ಸಲೆ ಸಂದು
ಇಂತೀ ತ್ರಿವಿಧಭಕ್ತಿಯಲ್ಲಿ ತ್ರಿಕರಣಶುದ್ಧನಾದ ಆತ್ಮಂಗೆ ಮತ್ರ್ಯ-ಕೈಲಾಸವೆಂಬ ಕಾಳುಮಾತಿಲ್ಲ. ಆತ ನಿತ್ಯಮುಕ್ತ ಎನ್ನಯ್ಯ ಚೆನ್ನರಾಮನಾಗಿ.